Open Letter to the Karnataka Government Condemning the Proposal to Conduct Self-Defence Classes for Girls on Temple Premises
To,
1. Shri Kota Srinivas Poojary,
Endowments Minister,
Government of Karnataka.
2. Shri BS Yediyurappa,
Chief Minister,
Government of Karnataka.

Dear Sir,
We the undersigned unequivocally condemn the proposal by the Karnataka Rajya Dharmika Parishath, which is being positively considered by the Endowments Minister of the Karnataka Government, to start self-defence classes for girls on temple premises all over the state.

We wish to raise the following concerns about this proposal:
1. Any plans to offer girls physical exercise and self-defence classes is welcome, and should be offered in every school and college in the state. But the onus of defending themselves from violence should not be placed on girls. The state government should begin classes for boys, on understanding and respecting consent and women's choices. Likewise, self-defence for women should not send the message that martial arts can prevent sexual violence. It is a well-documented fact that all over the world, rape and domestic violence by persons known to the victim are far more common than stranger rape - and in such situations martial arts are hardly helpful. Girls should be trained to understand that they should never feel obligated to adjust to demands by men in their lives, if those demands make them uneasy. They should be trained to know that their actions are never responsible for sexual violence or domestic violence. Both girls and boys should be taught to recognise and resist victim blaming arguments.
2. The proposal to hold self-defence classes for girls on temple premises, invoking the village deity (as news reports indicate) is questionable. Instead of linking religion with self-defence, the State Government would do well to invoke the Constitution and use this as an opportunity to popularise gender equality and womens’ rights laid down in the Constitution and various other laws. Why should a state funded self defence programme be linked to Hindu temples and deities - thus deterring the participation of girls from other faiths? Discrimination on the basis of religion is against the constitutional values of fraternity and equality. If the government is willing to fund self-defence for girls, why not hold these classes on school and college premises so that all can participate and feel welcome and included?
3. Linking a martial arts programme to Hindu temples and deities is worrying, also because it can easily lead to radicalisation. Instead of addressing a situation where girls and women are in danger of violence from men, it sends the misleading message that Hindu girls and women are in danger from men of "other" faiths. Religious organisations such as “Durga Vahini” hold martial arts training programmes that spread this hateful message - for an in-depth look at how such camps poison the minds of young girls, teaching them that they must learn to do violence to Muslims, see the film "The World Before Her" by Nisha Pahuja.
4. Conducting self-defence classes on temple premises is in furtherance of perpetuating caste discrimination against girls from oppressed castes, who would not be permitted entry into such temples. Thus, girls who would otherwise have self-defence training if conducted in schools and colleges, are discriminated against and excluded by conducting such classes only in temple premises.
5. Menstruating women also do not have access to temple premises when on their period. Thus, having such a policy perpetuates the practice of untouchability and purity-pollution against women. Such a policy is entirely Brahminical in nature, and finds no place in a constitutional democracy.

Hence, we, as women’s rights organisations, demand that:
A. The proposal to conduct self-defence classes for girls in temples should not be implemented.
B. The Government must conduct regular classes in schools and colleges on gender equality, sexual violence, and constitutional provisions.
C. The Government must conduct classes for boys on respecting autonomy of women and their decisions regarding their bodies and lives, and classes regarding consent.
Endorsed by:


ಗೆ,
 ಶ್ರೀ ಕೋಟ ಶ್ರೀನಿವಾಸ ಪೂಜಾರಿ,
 ಮುಜರಾಯಿ ಇಲಾಖೆ,
 ಕರ್ನಾಟಕ ಸರ್ಕಾರ.
 
ಶ್ರೀ ಬಿ.ಎಸ್ ಯಡಿಯೂರಪ್ಪ
ಸನ್ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ.

ಮಾನ್ಯರೆ,

ಕರ್ನಾಟಕದ ರಾಜ್ಯ ಧಾರ್ಮಿಕ ಪರಿಷತ್ ಎಂಬ ಸಂಸ್ಥೆಯು ದೇವಸ್ಥಾನಗಳ ಪರಿಸರದಲ್ಲಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣಾ ತರಗತಿಗಳನ್ನು ಪ್ರಾರಂಭಿಸಲು ಮಾಡಿರುವ ಮನವಿಯನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಖೆಯು  ಸಕ್ರಿಯವಾಗಿ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ನಾವು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸಂಸ್ಥೆಯ ಪ್ರಸ್ತಾವನೆಯನ್ನು ಉಗ್ರವಾಗಿ ಖಂಡಿಸುತ್ತೇವೆ.
 
ಈ ಪ್ರಸ್ತಾವನೆಯ ಬಗ್ಗೆ ಇರುವ ನಮ್ಮ ಆತಂಕಗಳು ಇಂತಿವೆ:
 1. ಹೆಣ್ಣುಮಕ್ಕಳಿಗೆ ದೈಹಿಕ ವ್ಯಾಯಾಮ ಮತ್ತು ಆತ್ಮರಕ್ಷಣೆಯ ತರಗತಿಗಳ ಅವಶ್ಯಕತೆ ಇದೆ, ಇದಕ್ಕೆ ನಮ್ಮ ಸಹಮತಿ ಇದೆ, ಮತ್ತು ಇದನ್ನು ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ  ಆಯೋಜಿಸಬೇಕು. ಆದರೆ ಹಿಂಸೆಯಿಂದ ಆತ್ಮ ರಕ್ಷಣೆಯ ಜವಾಬ್ದಾರಿಯನ್ನು  ಕೇವಲ ಹೆಣ್ಣುಮಕ್ಕಳ ಮೇಲೆ ಹೇರುವುದು ಉಚಿತವಲ್ಲ. ಜತೆಗೆ, ರಾಜ್ಯ ಸರ್ಕಾರವು ಗಂಡು ಮಕ್ಕಳಿಗೂ ಸಹ 'ಹೆಣ್ಣುಮಕ್ಕಳನ್ನು ಗೌರವಿಸುವ ಮತ್ತು ಅವರ ಆಯ್ಕೆಯನ್ನು ಒಪ್ಪುವ' ಮನಸ್ಥಿತಿಗಾಗಿ ತರಬೇತಿ ತರಗತಿಗಳನ್ನು ಪ್ರಾರಂಭಿಸಬೇಕು. ಹಾಗೇನೇ, ಸರ್ಕಾರದ ಈ ನೀತಿಯಿಂದ ಒಂದು ತಪ್ಪು ಸಂದೇಶ ನೀಡಲಾಗುತ್ತಿದೆ. ಅದೇನೆಂದರೆ, 'ಸಮರ ಕಲೆಗಳಿಂದ ಲೈಂಗಿಕ ಹಿಂಸೆಯನ್ನು ತಡೆಗಟ್ಟ ಬಹುದು', ಎಂಬುದು ಹೊರಡುತ್ತದೆ.  ಪ್ರಪಂಚಾದ್ಯಂತ ಒಂದು ಅಂಶ ಸ್ಪಷ್ಟವಾಗಿದೆ. ಅದೇನೆಂದರೆ,  ಅತ್ಯಾಚಾರ ಮತ್ತು ಮನೆಯೊಳಗಿನ ಹಿಂಸೆಯನ್ನು ಎಸಗುವವರು ಸಾಮಾನ್ಯವಾಗಿ ಆಕೆಗೆ ಪರಿಚಯಸ್ಥರು ಹಾಗೂ ಹತ್ತಿರದ ಸಂಭಂದಿಗಳು ಆಗಿರುತ್ತಾರೆ ಹೊರತು ಅಪಚರಿತರು ಅಲ್ಲ.
 
2. ಅತ್ಯಾಚಾರ ಮತ್ತು ಮನೆಯೊಳಗಿನ ಹಿಂಸೆ ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಸಮರ ಕಲೆಗಳನ್ನು ಕಲಿಸುವುದರಿಂದ ಹೆಚ್ಚು ಪ್ರಯೋಜನ ವಾಗುವುದಿಲ್ಲ. ಹೆಣ್ಣುಮಕ್ಕಳಿಗೆ ಅವರ ಜೀವನದಲ್ಲಿ, ಪುರುಷರು ಮಾಡುವ ಒತ್ತಡಗಳಿಗೆ  ಒಳಪಡದೆ, ಅದನ್ನು ಒಪ್ಪಬಾರದೆಂಬ ವಿಚಾರವನ್ನು ಅರ್ಥ ಮಾಡಿಸಬೇಕು. ಇಂತಹ ಒತ್ತಡಗಳ ವಿರುದ್ಧ ನಿಂತರೆ, ಆಕೆ ಮೇಲೆ ನಡೆಯುವ ಅತ್ಯಾಚಾರಕ್ಕೆ ಹಾಗೂ ಮನೆಯೊಳಗಿನ ಹಿಂಸೆಗೆ ಆಕೆ ಹೊಣೆ ಅಲ್ಲಾ. ಈ ರೀತಿಯ ಒತ್ತಾಯಗಳ ವಿರುದ್ಧ ಆಕೆಯನ್ನು ಸ್ಪಂದಿಸುವಂತೆ ಮಾಡಿ ಆಕೆ ಪ್ರತಿಕ್ರಿಯಿಸುವಂತೆ ತರಬೇತಿ ನೀಡಬೇಕು. ಮತ್ತು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರು ಸಹ ಸಂತ್ರಸ್ತೆಯನ್ನು ದೋಷಾರೋಪಣೆ ಮಾಡುವ ವಾದ-ವಿವಾದಕ್ಕೆ ಇಳಿಯ ಬಾರದು ಅದಕ್ಕೆ ಅವಕಾಶ ಕೊಡಬಾರದೆಂದು ತರಬೇತಿ ನೀಡಬೇಕು.

3. ಇನ್ನು, ದೇವಸ್ಥಾನದ ಆವರಣದಲ್ಲಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆಯ ತರಗತಿಗಳನ್ನು ನಡೆಸುವ ಉದ್ದೇಶ ಪ್ರಶ್ನಾರ್ಹ. ಏಕೆಂದರೆ ಆ ಸಂಘಟನೆಯ ಪ್ರಕಾರ ಗ್ರಾಮದೇವತೆಯನ್ನು ಪೂಜಿಸಿ ತರಬೇತಿ ನೀಡಲಾಗುವುದು ಎಂಬುದೆ ಪ್ರಶ್ನಾರ್ಹವಾಗಿದೆ. ಇನ್ನು ಆತ್ಮ ರಕ್ಷಣೆಯನ್ನು ಧರ್ಮದೊಂದಿಗೆ ಬೆರೆಸುವುದು ಅಥವಾ ಸಂಯೋಜನೆ ಮಾಡುವುದರ ಬದಲು, ಸಂವಿಧಾನದ ಆಶಯವನ್ನು ಆಧರಿಸ ಬೇಕು ಮತ್ತು ಸಂವಿಧಾನದ ವಿವಿಧ ಕಾನೂನುಗಳಲ್ಲಿ ಹೇಳಿರುವಂತಹ ಲಿಂಗ ಸಮಾನತೆಯ ಮತ್ತು ಮಹಿಳೆಯರ ಹಕ್ಕುಗಳ ಮೌಲ್ಯಗಳನ್ನು ಹೆಚ್ಚು ಜನಪ್ರಿಯ ಗೊಳಿಸಲು ಈ ಅವಕಾಶವನ್ನು ಉಪಯೋಗಿಸ ಬೇಕು. ಈ ಆತ್ಮರಕ್ಷಣಾ ಕಾರ್ಯಕ್ರಮಕ್ಕೆ ಕೇವಲ ಹಿಂದೂ ದೇವಸ್ಥಾನಗಳನ್ನು ಮತ್ತು ದೇವತೆಗಳನ್ನು ಏಕೆ ಮಿತಿಗೊಳಿಸಬೇಕು? ಇತರ ಧರ್ಮ ಮತ್ತು ನಂಬಿಕೆಗಳ ಹೆಣ್ಣುಮಕ್ಕಳು ಸಹ ಭಾಗವಹಿಸಬೇಕು. ಇದು ಭೇದಬಾವ  ಆಧಾರಿತವಾಗಿದ್ದು ಸಂವಿಧಾನದ ಮೌಲ್ಯಗಳಾದ ಭಾತೃತ್ವ ಮತ್ತು ಸಮಾನತೆಗೆ ವಿರುದ್ಧವಾಗಿವೆ.  

4. ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಅವರ ಆತ್ಮರಕ್ಷಣೆಗಾಗಿ ಹಣ ಖರ್ಚು ಮಾಡುವುದಾದರೆ ಅದನ್ನು ಶಾಲಾ-ಕಾಲೇಜುಗಳ ಅವರಣ ದಲ್ಲಿ ಮಾಡಬೇಕು ಮತ್ತು ಎಲ್ಲಾ ಹೆಣ್ಣುಮಕ್ಕಳು ಯಾವುದೇ ಭೇದಭಾವವಿಲ್ಲದೆ ಭಾಗವಹಿಸುವಂತೆ ಮಾಡಬೇಕು. ಎಲ್ಲರೂ ಒಳಗೊಳ್ಳುವ ಒಟ್ಟುಗೂಡುವ ಕಾರ್ಯ ಆಗಬೇಕು. ಸಮರ ಕಲೆಗಳ ಕಾರ್ಯಕ್ರಮವನ್ನು ಹಿಂದೂ ದೇವಸ್ಥಾನ ಮತ್ತು ದೇವತೆಗಳ ಪರಿಸರದಲ್ಲಿ ಮಾಡಿಸುವುದು ಆತಂಕಕಾರಿ ಮತ್ತು ಇದು ಧಾರ್ಮಿಕ ಮೂಲಭೂತವಾದಕ್ಕೆ ಈಡು ಮಾಡುತ್ತದೆ. ಪುರುಷರಿಂದ, ಮಹಿಳೆ ಹಾಗೂ ಹೆಣ್ಣು ಮಕ್ಕಳಿಗೆ ಹಿಂಸೆಯ ಅಪಾಯವಿದೆ ಎನ್ನುವ ಬದಲು, ಇಲ್ಲಿ ಇದರಿಂದ 'ಹಿಂದೂ ಹೆಣ್ಣು ಮಕ್ಕಳು ಮತ್ತು ಮಹಿಳೆಯರು', ಇತರ "ಧರ್ಮದ ಪುರುಷರಿಂದ" ಅಪಾಯಕ್ಕೇ ಒಳಗಾಗುತ್ತಾರೆ ಎಂಬ ತಪ್ಪು ಸಂದೇಶ ಕೊಟ್ಟಂತಾಗುತ್ತದೆ. ಈಗಾಗಲೇ ದುರ್ಗಾ ವಾಹಿನಿಯಂತಹ ಧಾರ್ಮಿಕ ಸಂಸ್ಥೆಗಳು ತಮ್ಮ ಸಮರ ಕಲೆಗಳ ತರಬೇತಿಯ ಮುಖಾಂತರ ಈ ರೀತಿಯ ದ್ವೇಷಮಯ ಸಂದೇಶವನ್ನು ರವಾನಿಸುತ್ತಿವೆ: ಈ ತರಬೇತಿ ಶಿಬಿರಗಳಲ್ಲಿ ಚಿಕ್ಕ ಹೆಣ್ಣು ಮಕ್ಕಳಿಗೆ ' ಮುಸ್ಲಿಮರಿಂದ ' ಆಗಬಹುದಾದ ಹಿಂಸೆಯಿಂದ ಹೇಗೆ ರಕ್ಷಣೆ ಪಡೆದುಕೊಳ್ಳುವುದು ಎಂಬುದನ್ನು  ಪ್ರಚಾರ ಮಾಡಲಾಗುತ್ತದೆ. ಇದು ಬಹಳ ಅಪಾಯಕಾರಿ!  ನಿಶಾ ಪಾಹುಜಾ ರವರ ಸಿನೆಮಾ, 'ಅವಳ ಮುಂದಿರುವ ಪ್ರಪಂಚ' (The World Before Her) I ವಿಷಯದ ಕುರಿತು ವಿಸ್ತಾರವಾಗಿ ತೋರಿಸಲಾಗಿದೆ.

5.  ಆತ್ಮ ರಕ್ಷಣಾ ತರಬೇತಿಯನ್ನು ದೇವಸ್ಥಾನದ ಆವರಣದಲ್ಲಿ  ಮಾಡುವುದೆಂದರೆ, ಇದೂ ಜಾತಿ ತಾರತಮ್ಯವನ್ನ  ತುಳಿತಕ್ಕೆ ಒಳಗಾದ ಕೆಳಜಾತಿಯ ಹೆಣ್ಣುಮಕ್ಕಳ ಮೇಲೆ ಆಗಿದ್ದು,  ದೇವಸ್ಥಾನಗಳಲ್ಲಿ ತಳ ಸಮುದಾಯಗಳಿಗೆ ಪ್ರವೇಶ ನೀಡದಿದ್ದರೆ ಈ ತರಬೇತಿಯಿಂದ ಏನೂ ಪ್ರಯೋಜನವಿಲ್ಲ. ಶಾಲಾ ಕಾಲೇಜುಗಳಲ್ಲಿ ಆತ್ಮ ರಕ್ಷಣಾ ತರಬೇತಿ, ನೀಡಿದರೆ ಜಾತಿ ತಾರತಮ್ಯ ಹಾಗೂ ಹೊರಗಿಡುವಿಕೆ ತಪ್ಪಿಸ ಬಹುದು.

6. ಮುಟ್ಟಾದ ಹೆಂಗಸರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಹೀಗಾಗಿ ಸರ್ಕಾರದ ಈ ಯೋಜನೆಯಿಂದ ಮಹಿಳೆ ಮೇಲೆ ಅಸ್ಪೃಶ್ಯತೆ ಮತ್ತು ಮಡಿ-ಮೈಲಿಗೆಗಳ ಅಪಚಾರ ಮಾಡಿದಂತಾಗುತ್ತದೆ.  ಈ ಕಾರ್ಯಕ್ರಮ ಸಂಪೂರ್ಣವಾಗಿ ಬ್ರಾಹ್ಮಣಶಾಹಿಯ ಗುಣಲಕ್ಷಣಗಳನ್ನು ಹೊಂದಿದ್ದು ಇದಕ್ಕೆ ಸಾಂವಿಧಾನಿಕ ಪ್ರಜಾಸತ್ತೆಯಲ್ಲಿ ಸ್ಥಾನವಿಲ್ಲ.

ಆದ್ದರಿಂದ, ಮಹಿಳಾ ಹಕ್ಕುಗಳ  ಸಂಘಟನೆಗಳಾದ ನಾವು ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತೇವೆ.

A. ದೇವಸ್ಥಾನಗಳಲ್ಲಿ ಹೆಣ್ಣುಮಕ್ಕಳಿಗೆ ಆತ್ಮ ರಕ್ಷಣಾ ತರಬೇತಿ ನೀಡುವ ಪ್ರಸ್ತಾವನೆಯನ್ನು ಈ ಕೂಡಲೆ  ನಿಲ್ಲಿಸಬೇಕೆಂದು ಒತ್ತಾಯಿಸುತ್ತೇವೆ.

B. ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಕ್ರಮಬದ್ಧವಾಗಿ ಲಿಂಗ ಸಮಾನತೆ, ಲೈಂಗಿಕ ಹಿಂಸೆ ಮತ್ತು ಸಂವಿಧಾನದತ್ತ ಹಕ್ಕುಗಳ ಬಗ್ಗೆ ತರಬೇತಿ ನೀಡಬೇಕು.

C. ಸರ್ಕಾರವು  ಗಂಡು ಮಕ್ಕಳಿಗೆ ಮಹಿಳೆಯರ ಸ್ವಾಯತ್ತತೆ ಬಗ್ಗೆ ,ಅವರ ದೇಹ ಮತ್ತು ಜೀವನದ ಬಗ್ಗೆ ಇರುವ ಹಕ್ಕನ್ನು ತಿಳಿಯುವಂತೆ ಅರಿವು ಮೂಡಿಸುವ ತರಬೇತಿ ಶಿಬಿರ ಗಳನ್ನ ನಡೆಸ ಬೇಕು.

ಕೆಳಕಂಡ ಸಂಘಟನೆಗಳು ತಮ್ಮ ಒಪ್ಪಿಗೆ ನೀಡಿವೆ:
Sign in to Google to save your progress. Learn more
Name *
Affiliation/Individual
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy