JavaScript isn't enabled in your browser, so this file can't be opened. Enable and reload.
KSEEB model Question Paper 2
Sign in to Google
to save your progress.
Learn more
* Indicates required question
Name of the Student
*
Your answer
School Name
Your answer
1. ವಿದ್ಯುತ್ಮಂಡಲ ಮತ್ತು ವಿದ್ಯುತ್ಉಪಕರಣಗಳನ್ನು ರಕ್ಷಿಸಲು ಬಳಸುವ ಸುರಕ್ಷಾ ಸಾಧನ
*
1 point
ಗ್ಯಾಲ್ವನೋಮೀಟರ್
ಫ್ಯೂಸ್
ದಿಕ್ಪರಿವರ್ತಕ
ಆಮ್ಮೀಟರ್
2. ಒಂದು ವಸ್ತುವನ್ನು ಪೀನಮಸೂರದ F1 ಮತ್ತು 2F1 ಗಳ ಮಧ್ಯೆ ಇರಿಸಿದಾಗ ಉಂಟಾಗುವ ಪ್ರತಿಬಿಂಬದ ಸ್ಥಾನ (F : ಪೀನಮಸೂರದ ಪ್ರಧಾನ ಸಂಗಮ)
*
1 point
ಅನಂತ ದೂರದಲ್ಲಿ
2F2 ನಲ್ಲಿ
F2ಮತ್ತು 2F2 ಗಳ ಮಧ್ಯೆ
2F2 ಗಿಂತ ದೂರದಲ್ಲಿ
Other:
3 ವಿದ್ಯುತ್ ಉತ್ಪಾದಿಸಲು ಟರ್ಬೈನ್ ಅನ್ನು ಉಪಯೋಗಿಸದೇ ಇರುವ ವಿದ್ಯುತ್ ಸ್ಥಾವರ
*
1 point
ಸೌರವಿದ್ಯುತ್ ಸ್ಥಾವರ
ನ್ಯೂಕ್ಲೀಯಾರ್ ವಿದ್ಯುತ್ ಸ್ಥಾವರ
ಉಷ್ಣ ವಿದ್ಯುತ್ ಸ್ಥಾವರ
ಜಲವಿದ್ಯುತ್ ಸ್ಥಾವರ
4. 20 Ω ರೋಧ ಹೊಂದಿರುವ ಒಂದು ವಿದ್ಯುತ್ ದೀಪ ಮತ್ತು 4 Ω ರೋಧವನ್ನು ಹೊಂದಿರುವ ವಾಹಕವನ್ನುಸರಣಿಯಲ್ಲಿ 6Vನ ಶುಷ್ಕಕೋಶಕ್ಕೆ ಚಿತ್ರದಲ್ಲಿರುವಂತೆ ಜೋಡಿಸಿದೆ. ಹಾಗಾದರೆ ಮಂಡಲದಲ್ಲಿ ಪ್ರವಹಿಸುತ್ತಿರುವಒಟ್ಟು ವಿದ್ಯುತ್ ಪ್ರವಾಹ
*
1 point
36A Ω
0.6A
4A
0.25A
5. ಫ್ಲೆಮಿಂಗ್ನ ಬಲಗೈ ನಿಯಮದಲ್ಲಿ ಮಧ್ಯದ ಬೆರಳು ಸೂಚಿಸುವುದು
*
1 point
ವಾಹಕದಲ್ಲಿ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು
ಕಾಂತಕ್ಷೇತ್ರದ ದಿಕ್ಕು
ವಿದ್ಯುತ್ ಪ್ರವಾಹದ ದಿಕ್ಕು
ವಾಹಕದ ಚಲನೆಯ ದಿಕ್ಕು
6. ಕೆಳಗಿನ ಕೋಷ್ಠಕವನ್ನು ಗಮನಿಸಿ : ಯಾವ ದ್ರವ್ಯ ಮಾಧ್ಯಮದಲ್ಲಿ ಬೆಳಕಿನ ವೇಗ ಅತ್ಯಂತ ಹೆಚ್ಚು?
*
1 point
S
R
P
Q
7. ತಾಮ್ರದ ಆಯತಾಕಾರದ ಸುರುಳಿಯನ್ನು ಕಾಂತಕ್ಷೇತ್ರದಲ್ಲಿ ತಿರುಗಿಸಿದಾಗ ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕು ಪ್ರತಿಬಾರಿ ಬದಲಾಗುವುದು
*
1 point
ಎರಡು ಸುತ್ತುಗಳಿಗೊಮ್ಮೆ
ಅರ್ಧ ಸುತ್ತಿಗೊಮ್ಮೆ
ಒಂದು ಸುತ್ತಿಗೊಮ್ಮೆ
ನಾಲ್ಕನೆ ಒಂದು ಸುತ್ತಿಗೊಮ್ಮೆ
8. ಜೈವಿಕ ಅನಿಲದ ಪ್ರಧಾನ ಘಟಕ
*
1 point
ಬ್ಯೂಟೇನ್
ಈಥೇನ್
ಮೀಥೇನ್
ಪ್ರೋಪೇನ್
9. ನಿಮ್ನ ಮಸೂರದ ಒಂದು ಗುಣ, ಇದು
*
1 point
ಅಂಚುಗಳಲ್ಲಿ ತೆಳುವಾಗಿದ್ದು ಮಧ್ಯದಲ್ಲಿ ದಪ್ಪವಾಗಿರುತ್ತದೆ.
ಬೆಳಕಿನ ಕಿರಣಗಳನ್ನು ವಿಕೇಂದ್ರೀಕರಿಸುತ್ತದೆ.
ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬವನ್ನು ಉಂಟುಮಾಡುತ್ತದೆ.
ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುತ್ತದೆ.
10. 220v ಜನರೇಟರ್ಗೆ ಒಂದು ವಿದ್ಯುತ್ ಬಲ್ಬ್ ಅನ್ನು ಸಂಪರ್ಕಿಸಲಾಗಿದೆ. ಆ ಬಲ್ಬ್ ನಲ್ಲಿ 0.50A ವಿದ್ಯುತ್ ಪ್ರವಾಹಪ್ರವಹಿಸಿದರೆ ಬಲ್ಬ್ ನ ಸಾಮರ್ಥ್ಯ
*
1 point
1100W
110W
220W
44W
11. ವಿದ್ಯುತ್ಮಂಡಲದಲ್ಲಿ ಆಮ್ಮೀಟರ್ನ ಕಾರ್ಯ, ಇದು
*
1 point
ವಿದ್ಯುತ್ ಉಪಕರಣಗಳನ್ನು ರಕ್ಷಿಸುತ್ತದೆ
ವಿದ್ಯುತ್ ಪ್ರವಾಹದ ದರವನ್ನು ಅಳೆಯುತ್ತದೆ
ವಿಭವಾಂತರವನ್ನು ಅಳೆಯುತ್ತದೆ
ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ
12. ಒಂದು ವಸ್ತುವಿನ ವಿದ್ಯುತ್ರೋಧಶೀಲತೆಯು ಹೆಚ್ಚಾದಂತೆ ಅದರ
*
1 point
ದ್ರವನ ಬಿಂದು ಕಡಿಮೆಯಾಗುತ್ತದೆ
ರೋಧ ಕಡಿಮೆಯಾಗುತ್ತದೆ
ವಾಹಕತೆ ಹೆಚ್ಚಾಗುತ್ತದೆ
ರೋಧ ಹೆಚ್ಚಾಗುತ್ತದೆ.
13. ಬೆಳಕು ಒಂದು ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾದು ಹೋಗುವಾಗ ಬಾಗುತ್ತದೆ. ಈವಿದ್ಯಮಾನ
*
1 point
ಬೆಳಕಿನ ಪ್ರತಿಫಲನ
ಬೆಳಕಿನ ವಕ್ರೀಭವನ
ಬೆಳಕಿನ ಆಂತರಿಕ ಪ್ರತಿಫಲನ
ಬೆಳಕಿನ ಪಾರ್ಶ್ವ ಪರಿವರ್ತನೆ
14. ಇವುಗಳಲ್ಲಿ ಯಾವುದು ಕಾಂತೀಯ ಬಲರೇಖೆಗಳ ಲಕ್ಷಣವಲ್ಲ?
*
1 point
ಕಾಂತೀಯ ಬಲರೇಖೆಗಳು ಧ್ರುವಗಳ ಬಳಿ ದಟ್ಟವಾಗಿರುತ್ತವೆ.
ಕಾಂತೀಯ ಬಲರೇಖೆಗಳು ಆವೃತ ಜಾಲವಾಗಿವೆ.
ಕಾಂತೀಯ ಬಲರೇಖೆಗಳು ಒಂದನ್ನೊಂದು ಛೇಧಿಸುತ್ತವೆ
ಕಾಂತೀಯ ಬಲರೇಖೆಗಳು ಉತ್ತರಧ್ರುವದಲ್ಲಿ ಉತ್ಸರ್ಜಿತವಾಗಿ ದಕ್ಷಿಣಧ್ರುವದಲ್ಲಿ ವಿಲೀನಗೊಳ್ಳುತ್ತವೆ.
15. ತಾಮ್ರವನ್ನು ಗಾಳಿಯಲ್ಲಿ ದೀರ್ಘಕಾಲದವರೆಗೆ ಇರಿಸಿದಾಗ ಹಸಿರು ಪದರವನ್ನು ಪಡೆದುಕೊಳ್ಳುತ್ತದೆ ಏಕೆಂದರೆ ಅದುಪ್ರತಿವರ್ತಿಸುವುದು
*
1 point
ತೇವಪೂರಿತ ಕಾರ್ಬನ್ ಡೈ ಆಕ್ಸೈಡ್ ನೊಂದಿಗೆ
ಸಲ್ಫರ್ನೊಂದಿಗೆ
ನೈಟ್ರೋಜನ್ನೊಂದಿಗೆ
ತೇವಪೂರಿತ ಆಕ್ಸಿಜನ್ನೊಂದಿಗೆ
16. ಬೆಂಜೀನ್ ಅಣುರಚನೆಯಲ್ಲಿರುವ ಏಕಬಂಧಗಳು ಮತ್ತು ದ್ವಿಬಂಧಗಳ ಸಂಖ್ಯೆಗಳು ಕ್ರಮವಾಗಿ
*
1 point
7 ಮತ್ತು 5
6 ಮತ್ತು 6
9 ಮತ್ತು 3
3 ಮತ್ತು 9
17. ಸೋಡಿಯಂ ಕಾರ್ಬೊನೇಟ್ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ
*
1 point
ನೈಟ್ರೋಜನ್ ಡೈ ಆಕ್ಸೈಡ್
ಕ್ಲೋರಿನ್
ಕಾರ್ಬನ್ ಡೈ ಆಕ್ಸೈಡ್
ಹೈಡ್ರೋಜನ್
18. ಸೈಕ್ಲೋಪ್ರೋಪೇನ್ ಮತ್ತು ಪ್ರೋಪೀನ್ಗಳೆರಡರ ಸಾಮಾನ್ಯ ಅಣುಸೂತ್ರ
*
1 point
C3H6
C2H6
C3H4
C3H8
19. ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ಬದಲಾಯಿಸುವ ವಸ್ತು
*
1 point
ಶುದ್ಧ ನೀರು
ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣ
ಸೋಡಿಯಂ ಕ್ಲೋರೈಡ್ ದ್ರಾವಣ
ಲಿಂಬೆರಸ
20. ಈ ಕೆಳಗಿನವುಗಳಲ್ಲಿ ಉಭಯವರ್ತಿ ಆಕ್ಸೈಡ್
*
1 point
ಕ್ಯಾಲ್ಸಿಯಂ ಆಕ್ಸೈಡ್
ಪೊಟ್ಯಾಸಿಯಂ ಆಕ್ಸೈಡ್
ಸತುವಿನ ಆಕ್ಸೈಡ್
ಸೋಡಿಯಂ ಆಕ್ಸೈಡ್
21. ತಾಮ್ರ ಮತ್ತು ತವರದಿಂದಾಗಿರುವ ಮಿಶ್ರಲೋಹ
*
1 point
ಹಿತ್ತಾಳೆ
ಬೆಸುಗೆ ಲೋಹ
ಕಂಚು
ಕಲೆರಹಿತ ಉಕ್ಕು
22. ಕಾರ್ಬನ್ ಡೈಆಕ್ಸೈಡ್ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನೊಂದಿಗೆ ವರ್ತಿಸಿದಾಗ ಲವಣ ಮತ್ತು ನೀರು ಉತ್ಪತ್ತಿಯಾಗುತ್ತವೆ. ಹಾಗಾದರೆ ಕಾರ್ಬನ್ ಡೈಆಕ್ಸೈಡ್ ನ ಗುಣ
*
1 point
ಪ್ರತ್ಯಾಮ್ಲೀಯ
ಆಮ್ಲೀಯ
ಲೋಹೀಯ
ಆಮ್ಲೀಯ ಮತ್ತು ಪ್ರತ್ಯಾಮ್ಲೀಯ
23. "ಮೂರು ಧಾತುಗಳನ್ನು ಅವುಗಳ ಪರಮಾಣು ರಾಶಿಯ ಏರಿಕೆ ಕ್ರಮದಲ್ಲಿ ಬರೆದಾಗ, ಅವುಗಳಲ್ಲಿ ಮಧ್ಯದ ಧಾತುವಿನ ಪರಮಾಣು ರಾಶಿಯು ಉಳಿದೆರಡು ಧಾತುಗಳ ಪರಮಾಣು ರಾಶಿಗಳ ಸರಿಸುಮಾರು ಸರಾಸರಿಗೆ ಸಮ''ಈ ನಿಯಮವನ್ನು ಪ್ರತಿಪಾದಿಸಿದವರು
*
1 point
ಹೆನ್ರಿ ಮೋಸ್ಲೆ
ಮೆಂಡಲೀವ್
ಡೋಬರೈನರ್
ನ್ಯೂಲ್ಯಾಂಡ್ಸ್
24. ಕಾರ್ಬನ್ ಇತರೆ ಕಾರ್ಬನ್ ಪರಮಾಣುಗಳೊಂದಿಗೆ ಬಂಧಗಳನ್ನು ಏರ್ಪಡಿಸಿಕೊಂಡು ಬೃಹತ್ ಅಣುಗಳನ್ನುಕೊಡುತ್ತದೆ. ಕಾರ್ಬನ್ನ ಈ ಅನನ್ಯ ಗುಣ
*
1 point
ಕೆಟನೀಕರಣ
ಹೈಡ್ರೋಜನೀಕರಣ
ಸಾಬೂನೀಕರಣ
ಎಸ್ಟರೀಕರಣ
25. ಇವುಗಳಲ್ಲಿ ಅನುರೂಪ ಶ್ರೇಣಿಯಲ್ಲಿರುವ ಸಂಯುಕ್ತಗಳ ಗುಂಪು
*
1 point
C2H2, C3H6, C4H10
CH4, C2H4, C2H2
CH4, C2H6, C3H8
CH4, CH3-OH, H-CHO
26. ಆಧುನಿಕ ಆವರ್ತಕ ಕೋಷ್ಠಕದಲ್ಲಿರುವ ಆವರ್ತಗಳು ಮತ್ತು ಗುಂಪುಗಳ (ಅಥವಾ ವರ್ಗಗಳ) ಸಂಖ್ಯೆಯು ಕ್ರಮವಾಗಿ
*
1 point
9 ಮತ್ತು 7
7 ಮತ್ತು 18
7 ಮತ್ತು 9
18 ಮತ್ತು 7
27. ಸಸ್ಯಗಳಲ್ಲಿ ಅಬ್ಸಿಸಿಕ್ ಆಮ್ಲ (ಹಾರ್ಮೋನ್)ದ ಪ್ರಮುಖ ಕಾರ್ಯ
*
1 point
ಸಸ್ಯದ ಬೆಳವಣಿಗೆಯನ್ನು ಪ್ರತಿಬಂಧಿಸುವುದು
ಕಾಂಡದ ಬೆಳವಣಿಗೆಯನ್ನು ಉತ್ತೇಜಿಸುವುದು.
ಕೋಶಗಳ ಉದ್ದವನ್ನು ಹೆಚ್ಚಿಸುವುದು
ಕೋಶ ವಿಭಜನೆಯನ್ನು ಉತ್ತೇಜಿಸುವುದು
28. ಈ ಕೆಳಗಿನವುಗಳಲ್ಲಿ ಹೂಬಿಡುವ ಸಸ್ಯಗಳ ಮತ್ತು ಮಾನವರ ಸಂತಾನೋತ್ಪತ್ತಿ ವ್ಯವಸ್ಥೆಗಳೆರಡರಲ್ಲೂ ಕಂಡು ಬರುವಸಾಮಾನ್ಯ ಭಾಗ.
*
1 point
ಶಲಾಕನಳಿಕೆ
ವೀರ್ಯನಾಳ
ಪರಾಗಕೋಶ
ಅಂಡಾಶಯ
29. ಈ ಕೆಳಗಿನವುಗಳಲ್ಲಿ ಆನುವಂಶೀಯವಾಗುವ ಗುಣ ಯಾವುದು?
*
1 point
ಇಲಿಗಳ ಬಾಲವನ್ನು ಶಸ್ತçಚಿಕಿತ್ಸೆಯ ಮೂಲಕ ತೆಗೆಯುವುದು
ಕ್ರೀಡಾಪಟುಗಳಲ್ಲಿ ಸ್ನಾಯುಗಳ ಬೆಳವಣಿಗೆ
ಹಸಿವಿನ ಕಾರಣದಿಂದ ಜೀವಿಯ ತೂಕ ಕಡಿಮೆಯಾಗುವುದು.
ಕಿವಿ ಹಾಲೆಯ ವಿಧ
30. ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳಗಳು
*
1 point
ಅಭಿಧಮನಿಗಳು
ಅಪಧಮನಿಗಳು
ಪುಪ್ಪುಸಕ ಅಪಧಮನಿಗಳು
ಲೋಮನಾಳಗಳು
31. ಈ ಪ್ರಕ್ರಿಯೆಯಿಂದ ಸಸ್ಯಗಳು ಹೆಚ್ಚಿನ ನೀರನ್ನು ಹೊರಹಾಕುತ್ತವೆ
*
1 point
ಬಾಷ್ಪ ವಿಸರ್ಜನೆ
ದ್ಯುತಿಸಂಶ್ಲೇಷಣೆ
ವಸ್ತುಸ್ಥಾನಾಂತರಣ
ಉಸಿರಾಟ
32. ಮಾನವನ ವಿಸರ್ಜನಾಂಗವ್ಯೂಹದಲ್ಲಿ ಮೂತ್ರ ಹರಿಯುವ ಸರಿಯಾದ ಮಾರ್ಗ
*
1 point
ಮೂತ್ರಪಿಂಡ → ಮೂತ್ರಕೋಶ → ಮೂತ್ರದ್ವಾರ →ಮೂತ್ರನಾಳ
ಮೂತ್ರಪಿಂಡ → ಮೂತ್ರನಾಳ → ಮೂತ್ರಕೋಶ → ಮೂತ್ರದ್ವಾರ
ಮೂತ್ರಕೋಶ → ಮೂತ್ರಪಿಂಡ → ಮೂತ್ರನಾಳ → ಮೂತ್ರದ್ವಾರ
ಮೂತ್ರಪಿಂಡ → ಮೂತ್ರನಾಳ → ಮೂತ್ರದ್ವಾರ → ಮೂತ್ರಕೋಶ
33. ಈ ಕೆಳಗಿನವುಗಳಲ್ಲಿ ಯಾವುದು ಜೀವವೈವಿಧ್ಯತೆಯ ಸೂಕ್ಷ್ಮತಾಣಗಳು?
*
1 point
ಸಾಗರಗಳು
ಅರಣ್ಯಗಳು
ಮರುಭೂಮಿಗಳು
ನದಿಗಳು
34. ಸಸ್ಯಗಳ ಹೂವಿನಲ್ಲಿ ಅಂಡಾಣುಗಳ ಕಡೆಗೆ ಪರಾಗರೇಣುವಿನ ನಳಿಕೆಗಳು ಬೆಳೆಯುವುದು
*
1 point
ದ್ಯುತಿ ಅನುವರ್ತನೆ
ರಾಸಾಯನಿಕಾನುವರ್ತನೆ
ಗುರುತ್ವಾನುವರ್ತನೆ
ಜಲಾನುವರ್ತನೆ
35. ಈ ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಒಳಗೊಂಡಿರುವ ಗುಂಪು
*
1 point
ಪಾಲಿಥಿನ್, ಮರ, ಚರ್ಮ
ಮರ, ಹುಲ್ಲು, ಚರ್ಮ
ಕಾಗದ, ಬೇಕ್ಲೈಟ್, ಹುಲ್ಲು
ಚರ್ಮ, ಮಾರ್ಜಕ, ಪ್ಲಾಸ್ಟಿಕ್
36. ಬಾಯಲ್ಲಿ ನೀರೂರುವಿಕೆ ಮತ್ತು ರಕ್ತದೊತ್ತಡಗಳಂತಹ ಅನೈಚ್ಚಿಕ ಕ್ರಿಯೆಗಳನ್ನು ನಿಯಂತ್ರಿಸುವ ಮಾನವನ ಮಿದುಳಿನಭಾಗ
*
1 point
ಮೆಡುಲ್ಲಾ
ಪಾನ್ಸ್
ಮಹಾಮಸ್ತಿಷ್ಕ
ಅನುಮಸ್ತಿಷ್ಕ
37. ಈ ಕೆಳಗಿನವುಗಳಲ್ಲಿ ಯಾವುದು ಮಾನವರ ಹೆಣ್ಣು ಸಂತಾನೋತ್ಪತ್ತಿವ್ಯೂಹದ ಭಾಗವಲ್ಲ?
*
1 point
ವೀರ್ಯನಾಳ
ಗರ್ಭಕೋಶ
ಅಂಡನಾಳ
ಅಂಡಾಶಯ
38. ಜಲಕೊಯ್ಲು ರಚನೆಗಳನ್ನು ನಿರ್ಮಿಸುವುದರ ಮುಖ್ಯ ಉದ್ದೇಶ
*
1 point
ಮೀನುಗಳ ಕೃಷಿಗೆ ನೀರನ್ನು ಬಳಸಲು
ಮಳೆ ನೀರನ್ನು ಭೂಮಿಯ ಮೇಲ್ಮೈಯಲ್ಲಿ ಹಿಡಿದಿಟ್ಟುಕೊಳ್ಳಲು
ಅಂತರ್ಜಲವನ್ನು ಮರುಭರ್ತಿಮಾಡಲು
ನೀರಾವರಿಗಾಗಿ ನೀರನ್ನು ಬಳಸಲು
39. ಶುದ್ಧ ಎತ್ತರದ ಬಟಾಣಿ (TT) ಸಸ್ಯವನ್ನು ಕುಬ್ಜ ಬಟಾಣಿ (tt) ಸಸ್ಯದೊಂದಿಗೆ ಸಂಕರಣಗೊಳಿಸಲಾಗಿದೆ. F2 ಪೀಳಿಗೆಯಲ್ಲಿ ಉತ್ಪತ್ತಿಯಾಗುವ ಶುದ್ಧ ಎತ್ತರದ ಬಟಾಣಿ ಸಸ್ಯಗಳಿಗೆ ಕುಬ್ಜ ಸಸ್ಯಗಳ ಅನುಪಾತ
*
1 point
1 : 1
3 : 1
1 : 3
2 : 1
40. ಬಾವಲಿ ಮತ್ತು ಪಾರಿವಾಳಗಳ ರೆಕ್ಕೆಗಳು ಇವುಗಳಿಗೆ ಉದಾಹರಣೆಯಾಗಿದೆ
*
1 point
ಹೊಂದಾಣಿಕೆಯ ಅಂಗಗಳು
ರಚನಾನುರೂಪಿ ಅಂಗಗಳು
ಕಾರ್ಯಾನುರೂಪಿ ಅಂಗಗಳು
ವೆಸ್ಟಿಜಿಯಲ್ ಅಂಗಗಳು
Submit
Clear form
Never submit passwords through Google Forms.
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Help and feedback
Help Forms improve
Report