PHD ದಿನಾಂಕ:01-01-1996 ರಿಂದ 31-12-2005ರ ಅವಧಿಯಲ್ಲಿ ಪಿ.ಹೆಚ್.ಡಿ ಪದವಿ ಪಡೆದಿರುವ ಅಧ್ಯಾಪಕರುಗಳಿಗೆ ದಿನಾಂಕ:19-09-2007 ರಿಂದ ನೀಡಿರುವ ಮುಂಗಡ ವೇತನ ಬಡ್ತಿಯನ್ನು ಕಾಲ್ಪನಿಕ ವೇತನ ನಿಗದೀಕರಣವೆಂದು ಪರಿಗಣಿಸಿರುವುದನ್ನು ಪರಿಷ್ಕರಿಸುವ ಕುರಿತು.

ಉಲ್ಲೇಖ: 1)ಸರ್ಕಾರದ ಪತ್ರ ಸಂಖ್ಯೆ: ಇಡಿ/61/ಯುಪಿಸಿ 2020, ದಿನಾಂಕ: 01-07-2020 ಮತ್ತು 22-10-2021.
               2)ಈ ಕಛೇರಿಯ ಸಮ ಸಂಖ್ಯೆಯ ಪತ್ರ ದಿನಾಂಕ: 06-02-2020.


ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1)ರ ಸರ್ಕಾರದ ಪತ್ರದಲ್ಲಿ ದಿನಾಂಕ:   01-01-1996 ರಿಂದ 31-12-2005ರ ಅವಧಿಯಲ್ಲಿ ಪಿ.ಹೆಚ್.ಡಿ ಪಡೆದ ಅಧ್ಯಾಪಕರುಗಳಿಗೆ ದಿನಾಂಕ:19-09-2007 ರಿಂದ ನೀಡಿರುವ ಕಾಲ್ಪನಿಕ ವೇತನ ಬಡ್ತಿಯನ್ನು ಪರಿಷ್ಕರಿಸಿದಲ್ಲಿ ಇದೇ ರೀತಿಯ ಸಮಾನಾಂತರ ಪ್ರಕರಣಗಳ ಸಂಖ್ಯೆ ಹಾಗೂ ಅವುಗಳಿಂದಾಗುವ ಆರ್ಥಿಕ ಹೊರೆಯ ವಿವಿರಗಳನ್ನು ಒದಗಿಸುವಂತೆ ಕೋರಲಾಗಿತ್ತು, ಈ ಕುರಿತು ಉಲ್ಲೇಖ(2)ರ ಈ ಕಛೇರಿಯ ಸಮಸಂಖ್ಯೆ ಪತ್ರದೊಂದಿಗೆ ಒದಗಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಪರಿಶೀಲಿಸಿ ಒದಗಿಸುವಂತೆ ಸೂಚಿಸಲಾಗಿತ್ತು. ಸದರಿ ಪತ್ರಕ್ಕೆ ಸಂಬಂಧಿಸಿದಂತೆ ಅನೇಕ ಕಾಲೇಜುಗಳ ಪ್ರಾಂಶುಪಾಲರುಗಳು ಮಾಹಿತಿ ಒದಗಿಸಿರುವುದಿಲ್ಲ, ಕೆಲವು ಕಾಲೇಜುಗಳ ಪ್ರಾಂಶುಪಾಲರು ಮಾಹಿತಿ ಒದಗಿಸಿದ್ದರೂ, ಅವುಗಳಲ್ಲಿ ಆರ್ಥಿಕ ಹೊರೆಯ ಮಾಹಿತಿ ಲಭ್ಯವಿರುವುದಿಲ್ಲ.

          ಆದ್ದರಿಂದ Google Format ನಲ್ಲಿ ಈ ಪತ್ರದೊಂದಿಗೆ ಲಗತ್ತಿಸಿರುವ ಮಾಹಿತಿಯನ್ನು  ವೈಯಕ್ತಿಕ ಗಮನ ಹರಿಸಿ ತಮ್ಮ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ಸಂಬಂಧಿಸಿದಂತೆ ಉಲ್ಲೇಖ(1)ರ ಸರ್ಕಾರಿ ಪತ್ರದಲ್ಲಿ ಸೂಚಿಸಿರುವ ಷರತ್ತಿಗೊಳಪಟ್ಟು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದೃಢೀಕರಿಸಿ ದಿನಾಂಕ:20-12-2021 ರೊಳಗೆ ಕೇಂದ್ರ ಕಛೇರಿಗೆ ಒದಗಿಸಲು ತಿಳಿಸಿದೆ. ಅಪೂರ್ಣ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಒದಗಿಸಿಲ್ಲದೇ ಇರುವ ಪ್ರಕರಣಗಳ ಕುರಿತು ಯಾವುದೇ ಕ್ರಮ ವಹಿಸಲಾಗುವುದಿಲ್ಲವೆಂದು ತಿಳಿಸಲಾಗಿದೆ.

Sign in to Google to save your progress. Learn more
Regional Office
College Code
College name
Principal Name
Principal Mobile no *
ದಿನಾಂಕ 01-01-96 ರಿಂದ 31-12-2005ರವರೆಗೆ ಸೇವೆಯಲ್ಲಿದ್ದ /ನೇಮಕಾತಿ ಪೂರ್ವದಲ್ಲಿ ಪಿಹೆಚ್‌ಡಿ ಪಡೆದ ಸಹ/ಸಹಾಯಕ ಪ್ರಾಧ್ಯಾಪಕರ  ಹೆಸರು ಶ್ರೀ/ಶ್ರೀಮತಿ *
ವಿಷಯ *
ನೇಮಕಾತಿ ಹೊಂದಿರುವ ದಿನಾಂಕ *
MM
/
DD
/
YYYY
ನೇಮಕಾತಿಗೆ ಪರಿಗಣಿಸಿರುವ ವಿದ್ಯಾರ್ಹತೆ *
ವೇತನ ಶ್ರೇಣಿ *
ಮೂಲ ವೇತನ *
Next
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy