Substance use / ChemSex Survey for Namma Pride


Introduction:
ಮುನ್ನುಡಿ:

There is a growing culture/subculture among queer men and trans women across the urban and rural areas alike, wherein substances like alcohol, cannabis and synthetic drugs are used to have sex. In the west it is being called chemsex and in India and some of the south asian countries, we know it as High Fun. This involves  getting high on “party drugs” like Gamma
Hydroxybutyrate/ Gamma Butyrolactone (GHB/GBL, known as G or Gina), Mephedrone (Meph
or Meow), Crystal Methamphetamine (Crystal Meth), and having sex. HF specifically involves
consuming crystal meth and/or a cocktail of meth and marijuana/hashish. Meth is often
“slammed” i.e. injected. However, we recognise that High Fun in India cannot be limited only to the consumption of meth, given the difficulty in the accessibility and the affordability of the chemical drugs. We have observed that other substances like high alcohol content beers and excessive smoking of cannabis and cigarettes with such alcohol are also done before, during and after sex.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ವೀಯರ್ (ಲೈಂಗಿಕ ಅಲ್ಪಸಂಖ್ಯಾತ/ಸಲಿಂಗಪ್ರೇಮಿ) ಪುರುಷರಲ್ಲಿ ಮತ್ತು ಟ್ರಾನ್ಸ್ ಮಹಿಳೆಯರಲ್ಲಿ ಬೆಳೆಯುತ್ತಿರುವ ಸಂಸ್ಕೃತಿ/ಉಪಸಂಸ್ಕೃತಿ  ಒಂದರಲ್ಲಿ ಮದ್ಯ, ಗಾಂಜಾ ಮತ್ತು ಕೃತಕ ಔಷಧಗಳಂತಹ ಮಾದಕವಸ್ತುಗಳನ್ನು ಸಂಭೋಗದ ಸಮಯದಲ್ಲಿ ಬಳಸಲಾಗುತ್ತಿದೆ. ಪಶ್ಚಿಮದಲ್ಲಿ ಇದನ್ನು ‘ಕೆಮ್ಸೆಕ್ಸ್’ ಎಂದು ಕರೆಯಲಾಗುತ್ತಿದ್ದು, ಭಾರತದಲ್ಲಿ ಮತ್ತು ದಕ್ಷಿಣ ಏಷ್ಯಾದ ಕೆಲವು ದೇಶಗಳಲ್ಲಿ ಇದನ್ನು ‘ಹೈ ಫನ್’ ಎಂದು ನಾವು ತಿಳಿದಿದ್ದೇವೆ. ಇದು ಗಾಮಾಹೈಡ್ರಾಕ್ಸಿಬ್ಯುಟೈರೇಟ್/ಗಾಮಾ ಬ್ಯುಟಿರೊಲ್ಯಾಕ್ಟೋನ್ (ಜಿ.ಎಚ್.ಬಿ/ಜಿ.ಬಿ.ಎಲ್, ಜಿ ಅಥವಾ ಜೀನಾ ಎಂದು ಕರೆಯಲಾಗುತ್ತದೆ), ಮೆಫೆಡ್ರೋನ್ (ಮೆಫ಼್ ಅಥವಾ ಮಿಯಾವ್), ಕ್ರಿಸ್ಟಲ್ ಮೆಥಾಂಫೆಟಮೈನ್ (ಕ್ರಿಸ್ಟಲ್ ಮೆಥ್)  ಅಂತಹ "ಪಾರ್ಟಿ ಡ್ರಗ್ಸ್" (ಮಾದಕವಸ್ತುಗಳು) ಅನ್ನು ಸಂಭೋಗದ ಸಮಯದಲ್ಲಿ ಅಥವಾ ಮೊದಲು ಸೇವಿಸುವುದು. ಎಚ್.ಎಫ಼್. ಅಂದರೆ ವಿಶೇಷವಾಗಿ ಕ್ರಿಸ್ಟಲ್ ಮೆಥ್ ಮತ್ತು/ಅಥವಾ ಮೆಥ್ ಮತ್ತು ಗಾಂಜಾ/ಹಶಿಶ್‌ನ ಬೆರಕೆ ಅನ್ನು ಸೇವಿಸುವುದ. ಮೆಥ್ ಅನ್ನು "ಸ್ಲ್ಯಾಮ್" ಮಾಡಿ ಅಂದರೆ ಸೂಜಿ/ಇಂಜೆಕ್ಷನ್ ನಿಂದ ಚುಚ್ಚಿ ಸೇವಿಸುವುದು. ಹಾಗಿದ್ದರೂ, ರಾಸಾಯನಿಕ ಔಷಧಿಗಳ ಲಭ್ಯತೆಯ ಮತ್ತು ಕೈಗೆಟುಕುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಎಚ್.ಎಫ಼್. ಕೇವಲ ಮೆಥ್ ಸೇವನೆಗೆ ಸೀಮಿತವಾಗಿಲ್ಲ ಎಂದು ನಾವು ಗುರುತಿಸುತ್ತೇವೆ. ಹೆಚ್ಚಿನ  ಮದ್ಯ ಮಟ್ಟ ಹೊಂದಿರುವ ಬಿಯರ್‌ಗಳನ್ನು ಕುಡಿದು, ಅದರೊಂದಿಗೆ ಗಾಂಜಾ ಮತ್ತು ಅತಿಯಾದ ಧೂಮಪಾನದಂತಹ ಇತರ ಮಾದಕವಸ್ತುಗಳನ್ನು ಸಂಭೋಗದ ಮೊದಲು, ಸಮಯದಲ್ಲಿ ಮತ್ತು ನಂತರ ಬಳಸಲಾಗುತ್ತದೆ ಎಂದು ನಾವು ಗಮನಿಸಿದ್ದೇವೆ.

Refer to the seminar last year
ಕಳೆದ ವರ್ಷದ ಸೆಮಿನಾರ್ ಅನ್ನು ನೋಡಿ

Pride month in Bangalore
ಬೆಂಗಳೂರಿನಲ್ಲಿ ಪ್ರೈಡ್ ತಿಂಗಳು
Pride month in Bangalore happens in November in celebration and commemoration of our lost friends & loved ones. We hope to remain a safe space for all, and hope to foster better physical health and mental health amongst our community. We are using the platform of Namma Pride to reach out to all of our community from various backgrounds and extend a helping hand.
ಬೆಂಗಳೂರಿನಲ್ಲಿ ಪ್ರೈಡ್ ತಿಂಗಳು ನವೆಂಬರ್‌ನಲ್ಲಿ ನಾವು ಕಳೆದುಕೊಂಡ ಸ್ನೇಹಿತರ ಮತ್ತು ನಮ್ಮ ಪ್ರೀತಿಪಾತ್ರರ ಸ್ಮರಣಾರ್ಥವಾಗಿ ಮತ್ತು ಆಚರಣೆಯಾಗಿ ನಡೆಯುತ್ತದೆ. ಎಲ್ಲರಿಗೂ ಸುರಕ್ಷಿತ ಸ್ಥಳವಾಗಿ ಉಳಿಯಲು ನಾವು ಆಶಿಸುತ್ತೇವೆ, ಹಾಗೂ ನಮ್ಮ ಸಮುದಾಯದಲ್ಲಿ ಉತ್ತಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಬೆಳೆಸಲು ಆಶಿಸುತ್ತೇವೆ. ನಮ್ಮ ಸಮುದಾಯದಲ್ಲಿ ವಿವಿಧ ಹಿನ್ನೆಲೆಗಳಿಂದ ಇರುವವರಿಗೆಲ್ಲರಿಗೂ ತಲುಪಲು ಮತ್ತು ಸಹಾಯ ನೀಡಲು ನಾವು ನಮ್ಮ ಪ್ರೈಡ್ ವೇದಿಕೆಯನ್ನು ಉಪಯೋಗಿಸುತಿದ್ದೇವೆ.

Why is this survey being done?
Chemsex is an under researched topic in India. Mostly due to the newly budding culture of chemsex as well as the stigma attached to it. Queer health issues are typically under researched in India as well. Currently, there is no database on chemsex or users in India. This survey is an effort to collect data that can be used to not only get a picture of the prevalence of chemsex in our community but also having this data might be helpful in creating a more comprehensive response to the issue at hand.
ಈ ಸಮೀಕ್ಷೆಯನ್ನು ಏಕೆ ಮಾಡಲಾಗುತ್ತಿದೆ?
ಕೆಮ್ಸೆಕ್ಸ್ ಭಾರತದಲ್ಲಿ ಕಡಿಮೆ ಸಂಶೋಧನೆಗೆ ವಿಷಯವಾಗಿದೆ. ಇದರ ಕಾರಣ ಕೆಮ್ಸೆಕ್ಸ್‌ ಹೊಸ ಅಭ್ಯಾಸ, ಸಂಸ್ಕೃತಿ ಆಗಿದ್ದು, ಅದಕ್ಕೆ ಕಳಂಕ ಒಡಗೂಡಿಸಲಾಗಿದೆ. ಕ್ವೀಯರ್ ಆರೋಗ್ಯ ಸಮಸ್ಯೆಗಳ ವಿಚಾರ ಸಾಮಾನ್ಯವಾಗಿ ಭಾರತದಲ್ಲಿ ಕಡಿಮೆ ಸಂಶೋಧನೆಯಾಗಿದೆ. ಪ್ರಸ್ತುತವಾಗಿ, ಭಾರತದಲ್ಲಿ ಕೆಮ್ಸೆಕ್ಸ್ ಅಥವಾ ಮಾದಕವಸ್ತುಗಳನ್ನು ಬಳಸುವವರ ಮೇಲೆ ಯಾವುದೇ ದತ್ತಸಂಚಯ ಇಲ್ಲ. ಈ ಸಮೀಕ್ಷೆಯು ನಮ್ಮ ಸಮುದಾಯದಲ್ಲಿ ಕೆಮ್‌ಸೆಕ್ಸ್‌ನ ವ್ಯಾಪಕತೆಯ ಮಾಹಿತಿಯನ್ನು ಸಂಗ್ರಹಿಸುವ ಪ್ರಯತ್ನವಾಗಿದ್ದು, ಈ ಮಾಹಿತಿಯನ್ನು ಹೊಂದಿರುವುದು ಈ ಸಮಸ್ಯೆಗೆ ವಿಸ್ತಾರವಾದ ಪ್ರತಿಕ್ರಿಯೆಯನ್ನು ಸೃಷ್ಠಿಸಲು ಸಹಾಯಕವಾಗಬಹುದು.

More information
ಹೆಚ್ಚಿನ ಮಾಹಿತಿ

For crisis related information email: namma.pride@gmail.com

For outreach email:  iqueercollective@gmail.com 

This survey does not focus only on “party drugs” but is a holistic research of consumption practices and patterns of a larger gamut of consumption of substances like alcohol and cannabis.
ಈ ಸಮೀಕ್ಷೆಯು "ಪಾರ್ಟಿ ಡ್ರಗ್ಸ್" ಅನ್ನು ಮಾತ್ರ ಕೇಂದ್ರೀಕರಿಸುವುದಿಲ್ಲ ಆದರೆ ಮದ್ಯ, ಗಾಂಜಾ, ಇತರ ದಂತಹ ಮಾದಕವಸ್ತುಗಳ ಸೇವನೆಯ ಮತ್ತು ಬಳಕೆಯ ಅಭ್ಯಾಸಗಳು ಹಾಗು ಮಾದರಿಗಳ ಸಮಗ್ರ ಸಂಶೋಧನೆಯಾಗಿದೆ.

Thank you for participating in this survey. We are interested in understanding the patterns of substance use during or before sexual activities and its potential impact on various aspects such as safety during sex, physical health, and mental health.
ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು. ಸಂಭೋಗದ ಸಮಯದಲ್ಲಿ ಅಥವಾ ಮೊದಲು ಮಾದಕವಸ್ತುಗಳ ಬಳಕೆಯ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ನಾವು ಆಸಕ್ತಿ ಹೊಂದಿದ್ದೇವೆ. ಸಂಭೋಗದ ಸಮಯದಲ್ಲಿ ಸುರಕ್ಷತೆ, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯದಂತಹ ವಿವಿಧ ಅಂಶಗಳ ಮೇಲೆ ಅದರ ಸಂಭಾವ್ಯ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ನಮಗೆ ಆಸಕ್ತಿ ಇದೆ.

Your responses will remain entirely anonymous and will be used for research purposes only.
ನಿಮ್ಮ ಪ್ರತಿಕ್ರಿಯೆಗಳು ಸಂಪೂರ್ಣವಾಗಿ ಅನಾಮಧೇಯವಾಗಿ ಉಳಿಯುತ್ತವೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ.


Please answer the following questions to the best of your knowledge and comfort level.
ದಯವಿಟ್ಟು ಕೆಳಗಿನ ಪ್ರಶ್ನೆಗಳಿಗೆ ನಿಮ್ಮ ಅರಿವಿನ ಮತ್ತು ಸೌಕರ್ಯದ ತಕ್ಕಂತೆ ಉತ್ತರಿಸಿ.

There are a total of 6 sections of multiple choice questions. Kindly fill all the required fields.
ಬಹು ಆಯ್ಕೆಯ ಪ್ರಶ್ನೆಗಳ ಒಟ್ಟು 6 ವಿಭಾಗಗಳಿವೆ. ದಯವಿಟ್ಟು ಅಗತ್ಯವಿರುವ ಎಲ್ಲಾ ಕ್ಷೇತ್ರಗಳನ್ನು ಭರ್ತಿ ಮಾಡಿ.


Thank you & Happy pride!
ಧನ್ಯವಾದಗಳು ಮತ್ತು Pride ಶುಭಾಶಯಗಳು!

Sign in to Google to save your progress. Learn more
Next
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy